Skip to main content

Posts

Showing posts with the label ಜನಪದ ಗೀತೆಗಳು

ಜನುಮದಿನ ಗೀತೆ

ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು. ಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂ ತನೋತು ತೇ ಸರ್ವದಾ ಮುದಂ ಪ್ರಾರ್ಥಯಾಮಹೇ ಭವ ಶತಾಯುಷೀ ಈಶ್ವರಸ್ಸದಾ ತ್ವಾಂ ರಕ್ಷತು ಪುಣ್ಯಕರ್ಮಣಾ ಕೀರ್ತಿಮರ್ಜಯ ಜೀವನಂ ತವ ಭವತು ಸಾರ್ಥಕಂ

ಚೆಲುವಿ ಚೆಲುವಿ

ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ ನೇರಳೆ ಹಣ್ಣು ಬಲು ಕಪ್ಪು ನೇರಳೆ ಹಣ್ಣು ಬಲು ಕಪ್ಪು ಆದರೂ ಸವಿದು ನೋಡಿದರೆ ರುಚಿಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ ಹತ್ತಿಯಾಹಣ್ಣು ಬಲು ಕೆಂಪು ಹತ್ತಿಯಾಹಣ್ಣು ಬಲು ಕೆಂಪು ಆದರೂ ಒಡೆದು ನೋಡಿದರೆ ಹುಳುಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಬಂಗಾರ ಬಲೆ ತೊಟ್ಟು ಬಡವಾರ ಬೈಬೇಡ ಬಂಗಾರ ನಿನಗೆ ಸ್ಥಿರವಲ್ಲ ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾಹ್ನ ಸಂಜೆ ಆಗುವುದೂ ತಡವಿಲ್ಲ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨-

ಮುಂಜಾನೆದ್ದು ಕುಂಬಾರಣ್ಣ

ಮು೦ಜಾನೆದ್ದು ಕು೦ಬಾರಣ್ಣ ಹಾಲು ಬಾನು೦ದಾನ ಹಾರ್ಯಾರಿ ಮಣ್ಣಾ ತುಳಿದಾನ ಹಾರು ಹಾರ್ಯಾರಿ ಮಣ್ಣ ತುಳಿಯೂತ ಮಾಡ್ಯಾನ ನಾರ್ಯೀರು ಹೊರುವಂಥ ಐರಾಣಿ - ಹೊತ್ತಾರೆದ್ದು ಕು೦ಬಾರಣ್ಣ ತುಪ್ಪ ಬಾನು೦ಡಾನ ಗಟ್ಟೀಸಿ ಮಣ್ಣಾ ತುಳಿದಾನ ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ ಮಿತ್ರೇರು ಹೊರುವ೦ತೆ ಐರಾಣಿ ಅಕ್ಕಿಲಿಟ್ಟು ನಾವು ತಕ್ಕೊ೦ಡು ತ೦ದೀವಿ ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಕು೦ಬಾರಣ್ಣ ತ೦ದೀಡು ನಮ್ಮ ಐರಾಣಿ ಕು೦ಬಾರಣ್ಣ ಮಡದಿ ಕಡಗಾದ ಕೈಯಿಕ್ಕಿ ಕೊಡದಾ ಮ್ಯಾಲೇನ ಬರೆದಾಳ ಕೊಡದಾ ಮ್ಯಾಲೇನ ಬರೆದಾಳ ಕಲ್ಯಾಣದ ಶರಣಾ ಬಸವನ ನಿಲಿಸ್ಯಾಳ