ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ -೨-
ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು
ನೇರಳೆ ಹಣ್ಣು ಬಲು ಕಪ್ಪು ಆದರೂ
ಸವಿದು ನೋಡಿದರೆ ರುಚಿಬಹಳ
ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ -೨-
ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ
ಹತ್ತಿಯಾಹಣ್ಣು ಬಲು ಕೆಂಪು
ಹತ್ತಿಯಾಹಣ್ಣು ಬಲು ಕೆಂಪು ಆದರೂ
ಒಡೆದು ನೋಡಿದರೆ ಹುಳುಬಹಳ
ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ -೨-
ಬಂಗಾರ ಬಲೆ ತೊಟ್ಟು ಬಡವಾರ ಬೈಬೇಡ
ಬಂಗಾರ ನಿನಗೆ ಸ್ಥಿರವಲ್ಲ
ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾಹ್ನ
ಸಂಜೆ ಆಗುವುದೂ ತಡವಿಲ್ಲ
ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ -೨-
Comments
Post a Comment