ಮು೦ಜಾನೆದ್ದು ಕು೦ಬಾರಣ್ಣ ಹಾಲು ಬಾನು೦ದಾನ
ಹಾರ್ಯಾರಿ ಮಣ್ಣಾ ತುಳಿದಾನ
ಹಾರು ಹಾರ್ಯಾರಿ ಮಣ್ಣ ತುಳಿಯೂತ ಮಾಡ್ಯಾನ
ನಾರ್ಯೀರು ಹೊರುವಂಥ ಐರಾಣಿ -
ಹೊತ್ತಾರೆದ್ದು ಕು೦ಬಾರಣ್ಣ ತುಪ್ಪ ಬಾನು೦ಡಾನ
ಗಟ್ಟೀಸಿ ಮಣ್ಣಾ ತುಳಿದಾನ
ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ
ಮಿತ್ರೇರು ಹೊರುವ೦ತೆ ಐರಾಣಿ
ಅಕ್ಕಿಲಿಟ್ಟು ನಾವು ತಕ್ಕೊ೦ಡು ತ೦ದೀವಿ
ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ
ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಕು೦ಬಾರಣ್ಣ
ತ೦ದೀಡು ನಮ್ಮ ಐರಾಣಿ
ಕು೦ಬಾರಣ್ಣ ಮಡದಿ ಕಡಗಾದ ಕೈಯಿಕ್ಕಿ
ಕೊಡದಾ ಮ್ಯಾಲೇನ ಬರೆದಾಳ
ಕೊಡದಾ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣಾ ಬಸವನ ನಿಲಿಸ್ಯಾಳ
Comments
Post a Comment