Skip to main content

ಕರುಣಿಸೋ ರಂಗ

ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ |
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ॥ ಪ || ಕರುಣಿಸೋ ॥

ರುಕುಮಾಂಗದನಂತೆ ವ್ರತವ ನಾನರಿಯೆ |
ಶುಕಮುನಿಯಂತೆ ಸ್ತುತಿಸಲು ಅರಿಯೆ |
ಬಕವೈರಿಯಂತೆ ಧ್ಯಾನವ ಮಾಡಲರಿಯೇ |
ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ || ಕರುಣಿಸೋ ||

ಗರುಡನಂದದಿ ಪೊತ್ತು ತಿರುಗಲು ಅರಿಯೆ |
ಕರಿಯಲು ಅರಿಯೆ ಕರಿರಾಜ ನಂತೆ |
ವರಕಪಿ ಯಂತೆ ದಾಸ್ಯವ ಮಾಡಲರಿಯೇ |
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ || ಕರುಣಿಸೋ ||

ಬಲಿಯಂತೆ ದಾನವ ಕೊಡಲು ಅರಿಯೆ |
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ |
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ |
ಸಲಹೋ ದೇವರ ದೇವ ಶ್ರೀಪುರಂದರವಿಠ್ಠಲ || ೩ || ಕರುಣಿಸೋ ||

Comments

Popular posts from this blog

ಭಜ ಗೋವಿಂದಂ (ಮೋಹ ಮುದ್ಗರಂ)

ಭಜ ಗೋವಿಂದಂ (ಮೋಹ ಮುದ್ಗರಂ) ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ । ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ ॥ 1 ॥ ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಮ್ । ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ॥ 2 ॥ ನಾರೀಸ್ತನಭರ-ನಾಭೀದೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಮ್ । ಏತನ್ಮಾಂಸವಸಾದಿವಿಕಾರಂ ಮನಸಿ ವಿಚಿಂತಯ ವಾರಂ ವಾರಮ್ ॥ 3 ॥ ನಲಿನೀದಲ-ಗತಜಲಮತಿತರಲಂ ತದ್ವಜ್ಜೀವಿತಮತಿಶಯ-ಚಪಲಮ್ । ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ ಲೋಕಂ ಶೋಕಹತಂ ಚ ಸಮಸ್ತಮ್ ॥ 4 ॥ ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ । ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ ॥ 5 ॥ ಯಾವತ್ಪವನೋ ನಿವಸತಿ ದೇಹೇ ತಾವತ್ಪೃಚ್ಛತಿ ಕುಶಲಂ ಗೇಹೇ । ಗತವತಿ ವಾಯೌ ದೇಹಾಪಾಯೇ ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ ॥ 6 ॥ ಬಾಲಸ್ತಾವತ್ಕ್ರೀಡಾಸಕ್ತಃ ತರುಣಸ್ತಾವತ್ತರುಣೀಸಕ್ತಃ । ವೃದ್ಧಸ್ತಾವಚ್ಚಿಂತಾಸಕ್ತಃ ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ ॥ 7 ॥ ಕಾ ತೇ ಕಾಂತಾ ಕಸ್ತೇ ಪುತ್ರಃ ಸಂಸಾರೋಽಯಮತೀವ ವಿಚಿತ್ರಃ । ಕಸ್ಯ ತ್ವಂ ಕಃ ಕುತ ಆಯಾತಃ ತತ್ತ್ವಂ ಚಿಂತಯ ತದಿಹ ಭ್ರಾತಃ ॥ 8 ॥ ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ ನಿಶ್ಚಲತತ್ತ್ವೇ ಜೀವನ್ಮುಕ್ತಿಃ ॥ 9 ॥ ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ

ಮಹಿಷಾಸುರ ಮರ್ದಿನಿ ಸ್ತೋತ್ರ

ಅಯಿಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ ಗಿರಿವರ ವಿಂಧ್ಯ-ಶಿರೋ‌ಧಿನಿವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ ಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ ||1|| ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇ ದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||2|| ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇ ಶಿಖರಿ ಶಿರೋಮಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ ಮಧುಮಧುರೇ ಮಧು ಕೈಟಭ ಗಂಜಿನಿ ಕೈಟಭ  ಭಂಜಿನಿ ರಾಸರತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||3|| ಅಯಿ ಶತಖಂಡ ವಿಖಂಡಿತ ರುಂಡವಿ ತುಂಡಿತ ಶುಂಡ ಗಜಾಧಿಪತೇ ರಿಪು ಗಜ ಗಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ | ನಿಜ ಭುಜದಂಡ ನಿಪಾತಿತ ಖಂಡ ವಿಪಾತಿತ ಮುಂಡ-ಭಟಾಧಿಪತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||4|| ಅಯಿ ರಣ ದುರ್ಮದ ಶತ್ರು ವಧೋದಿತ ದುರ್ಧರ ನಿರ್ಜರ ಶಕ್ತಿಭೃತೇ ಚತುರ-ವಿಚಾರ-ಧುರೀಣ-ಮಹಾಶಿವ-ದೂತಕೃತ-ಪ್ರಮಥಾಧಿಪತೇ | ದುರಿತ ದುರೀಹ ದುರಾಶಯ ದುರ್ಮತಿದಾನವ ದೂತ ಕೃತಾಂತಮತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ 

ನಿರ್ವಾಣ ಷಟಕಮ್

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ | ನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್  || 1 || ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ ನ ವಾ ಸಪ್ತಧಾತುರ್ ನ ವಾ ಪಂಚ ಕೋಶಾಃ | ನ ವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 2 || ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ ಮದೋ ನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 3 || ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ | ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 4 || ನ ಮೃತ್ಯುರ್ ನ ಶಂಕಾ ನ ಮೇ ಜಾತಿ ಭೇದಃ ಪಿತಾ ನೈವ ಮೇ ನೈವ ಮಾತಾ ನ ಜನ್ಮ | ನ ಬಂಧುರ್ ನ ಮಿತ್ರಂ ಗುರುರ್ನೈವ ಶಿಷ್ಯಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 5 || ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ ವಿಭೂತ್ವಾಚ್ಚ ಸ